Tuesday, May 5, 2009

ಸಂಪ್ರದಾಯ ೦೯ - ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಕಾರ್ಯಕ್ರಮ







(ಬ್ಲಾಗ್ ಕಡೆ ತಲೆ ಹಾಕ್ದೇ ಬಿಜಿಯಾಗಿರೋದಕ್ಕೆ ನಾನು ಕೊಡೋ ಏನೇನೋ ಕಾರಣಗಳಲ್ಲಿ ಲೇಟೆಸ್ಟು ಇದು.)




ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಮುಖ ಆಕರ ಗ್ರಂಥಗಳಲ್ಲೊಂದು ’ಸಂಗೀತ ಸಂಪ್ರದಾಯ ಪ್ರದರ್ಶಿನಿ’. ನೂರು ವರ್ಷಗಳ ಹಿಂದೆ(೧೯೦೫) ತೆಲುಗಿನಲ್ಲಿ ಪ್ರಕಟವಾದ ಈ ಪುಸ್ತಕ ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರ ೨೨೫ ಕೃತಿಗಳನ್ನು ಒಳಗೊಂಡಿದ್ದು, ಶಾಸ್ತ್ರ-ಪ್ರಯೋಗಗಳೆರಡಕ್ಕೂ ಪ್ರಾಮುಖ್ಯ ನೀಡಿದೆ. ಕರ್ನಾಟಕ ಸಂಗೀತದ ಜೀವ ಅನ್ನಬಹುದಾದ ಗಮಕಗಳನ್ನು ಪ್ರದರ್ಶಿನಿ ವಿವರಿಸಿರುವ ರೀತಿ ಅದರ ಪ್ರಸ್ತುತತೆಗೆ ಇನ್ನೊಂದು ಮುಖ್ಯ ಕಾರಣ. ಶ್ರೀ ಆನಂದರಾಮ ಉಡುಪರು ರಚಿಸಿರುವ ಈ ಗ್ರಂಥದ ಕನ್ನಡ ಆವೃತ್ತಿಯನ್ನು ಅನನ್ಯ ಇತ್ತೀಚೆಗೆ ಹೊರತಂದಿದೆ. ಪ್ರದರ್ಶಿನಿಯ ಕನ್ನಡ ಅವತರಣಿಕೆಯನ್ನು ಜನರಿಗೆ ತಲುಪಿಸುವ ಪ್ರಯತ್ನ - ಸಂಪ್ರದಾಯ ೦೯. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಿಗೆ ಮೀಸಲಿಟ್ಟ ಈ ಕಾರ್ಯಕ್ರಮ ಮೇ ೧೦ರಂದು ಗಾಯನಸಮಾಜದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಮುಖ ಗಾಯಕರಾದ ವಿ ಎಂ ಎಸ್ ಶೀಲಾ, ವಿ ಟಿ ಎಸ್ ಸತ್ಯವತಿ, ವಿ ಆರ್ ಕೆ ಪದ್ಮನಾಭ, ವಿ ಟಿ ಎಂ ಕೃಷ್ಣ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಪ್ರದರ್ಶಿನಿಯ ಕುರಿತು ಶ್ರೀ ವಿ ಶ್ರೀರಾಂ ಹಾಗೂ ಶ್ರೀಮತಿ ಆರ್ ಎಸ್ ಜಯಲಕ್ಷ್ಮಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಆಹ್ವಾನಪತ್ರಿಕೆ ಇಲ್ಲಿದೆ. ವಿವರಗಳಿಗೆ:www.ananyasampradaya.blogspot.ಕಂ.