Friday, May 16, 2008

ಸುಮ್ಮನೆರಡು ಸಾಲು

ಸಿಕ್ಕಾಪಟ್ಟೆ ಕೆಲ್ಸಗಳು... ಸಂಗೀತಾಭ್ಯಾಸ, ಮೊದಲ ಶಿಷ್ಯೆಯ ಎಕ್ಸಾಂ, ಸುಮನಾ ಜೊತೆಗೆ ಅನನ್ಯದ ’ಅಭಿವ್ಯಕ್ತಿ’ಗೆ ಸಂಪ್ರದಾಯ- ಆಧುನಿಕತೆಯ ಬಗ್ಗೆ ಹಿರಿ-ಕಿರಿಯ ಕಲಾವಿದರ ಜೊತೆ ಸಂವಾದದ ಸರಣಿ(ಅದರ್ ಬಗ್ಗೆ ಇನ್ನೊಂದ್ಸಲ ಬರೀತೀನಿ!) ಷುರು...ಅದಕ್ಕಾಗಿ interviewಗಳು, ಅವುಗಳನ್ನ ಬರಹಕ್ಕಿಳಿಸೋದು... ಹಾಗಂತ ಈಗಷ್ಟೆ ಅಂಬೆಗಾಲಿಡ್ತಿರೋ ಬ್ಲಾಗ್ ಮರಿಯನ್ನ ಮರೆತು ಕೂತ್ಕೋಬಾರದಲ್ಲ! ರಾಮನವಮಿಯಲ್ಲಿ ಕೇಳಿದ್ ಒಂದೆರಡು ಕಛೇರಿಗಳ ಬಗ್ಗೆ ಆಡಿಯೋ ಕ್ಲಿಪ್ ಹಾಕಿ ಬರಿಯೋಣ ಅಂತ ಪ್ಲ್ಯಾನ್ ಹಾಕ್ತಿದ್ದೆ. ಆದ್ರೆ ಆಡಿಯೋ ಎಡಿಟ್ ಮಾಡೋಕೆ, ವಿವರವಾಗಿ ಬರಿಯೋಕೂ ಸದ್ಯಕ್ಕೆ ಟೈಮಿಲ್ಲ... ಏನ್ಮಾಡೋದು? ಆಡಿಯೋ ಕ್ಲಿಪ್ ಹಾಕೋದರ ಟ್ರಯಲ್ ಆಗ್ಬಹುದಲ್ಲ! ನಿನ್ನ ಹಾಡಿನ ಪಾಡ್ಕಾಸ್ಟ್ ಮಾಡ್ಬಹುದಲ್ಲ ಅಂತ ಬಂದ ಸಲಹೆಗೂ ಉತ್ತರವಾಗುತ್ತೆ... ಸರಿ ರಾತ್ರಿ ಕೂತು ಭರ್ರಂತ ಹೋಗೋ ಬೈಕು, ಕಿರ್ರನ್ನೋ ಗೇಟು, ಬೊಗಳೋ ನಾಯಿಗಳ ಮಧ್ಯ ಪೂರ್ತಿ ಹಾಡು ರೆಕಾರ್ಡ್ ಮಾಡೋಕೆ ಮತ್ತೆ ಸೋಮಾರ್ತನ! ’ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ’ ಹಾಡಿನ ಎರಡೇ ಎರಡು ಸಾಲು, ನನಗೆ ತುಂಬಾ ಇಷ್ಟದ ಸಾಲುಗಳು. ಕೇಳಿ, ನನ್ನ ಸೋಮಾರಿತನ ಕಮ್ಮಿ ಆಗ್ಲಿ ಅಂತ ಆಶೀರ್ವಾದ ಮಾಡಿ!:P

ninagende nelabaan...