Sunday, January 27, 2008

ಹೊಸ ಹಾಡು

ನನ್ನ ಹಾಡು ಅಂದ್ರೆ ಏನಪ್ಪಾ ಇವಳು ಕಿರ್ಚಿಕೊಳ್ಳೋದನ್ನ ದಿನಾ ಇಲ್ಲಿ ಬಂದು ನಾವು ಕೇಳಿ ಅನುಭವಿಸಬೇಕಾ ಅಂತ ಗಾಬ್ರಿ ಆಗಿಬಿಟ್ಟ್ರಾ? ಯೋಚ್ನೆ ಮಾಡಬೇಡಿ, ಈ ಬ್ಲಾಗ್‌ಗೆ ಅಂಥಾ ಭಯಾನಕ ಲಿಮಿಟೆಡ್ ಅರ್ಥ ಇಲ್ಲ!:)

ಹಲವು ಸಲ ನಾವು ಕೇಳಿದ್ ಹಾಡು, ನೋಡಿದ್ ನೋಟ, ಓದಿದ್ ಸಾಲು ದುಂಬಿಯಂತೆ ಮನಸ್ಸಲ್ಲಿ ಗುಯ್ಗುಡ್ತಾ ಇರತ್ತೆ. ಬೆಳಿಗ್ಗೆ ಕೇಳಿದ ಯಾವ್ದೋ ಟಪ್ಪಾಂಗೂಚಿ ಹಾಡು ರಾತ್ರಿ ವರೆಗೂ ಗುನುಗಿ ಮನೆಯವರಿಗೆಲ್ಲಾ ತಲೆಚಿಟ್ಟ್ ಹಿಡ್ಸೋದ್ರಲ್ಲಿ ನಾನು ಎಕ್ಸ್‌ಪರ್ಟು! ಹೀಗೆ ಕಾಡೋ ಕೆಲವು ಹಾಡುಗಳಿಗೆ, ಸಂಗೀತಸಾಗರದಲ್ಲಿ ನನ್ನ ಬೊಗಸೆಗೆ ಸಿಗುವ ಕೆಲವು ಹನಿಗಳಿಗೆ ಇಂದಿನಿಂದ ಇಲ್ಲೊಂದು ಪುಟ್ಟಮನೆ. ಕಚೇರಿಗಳು, ಕಲಾವಿದರು, ಪುಸ್ತಕಗಳು... ನನ್ನ ಮನದ ಬಾಗಿಲು ತಟ್ಟೋ ಎಲ್ಲ ಸ್ವರಗಳಿಗೆ ಇಲ್ಲಿ ಅಭಿವ್ಯಕ್ತಿ.

ಅಮ್ಮನ ಮಡಿಲಲ್ಲಿ ಇಳಿದ ದಿನದಿಂದ ಸಂಗೀತದ ಸಾಂಗತ್ಯ... ಅಪ್ಪನ ’ವಂದೇಮಾತರಂ’ಗೆ ತೊದಲುನುಡಿಗಳ ಹಿಮ್ಮೇಳ... ಹನ್ನೆರಡರ ಪುಟ್ಟ ಹೆಜ್ಜೆಗಳಿಂದ ಪ್ರೀತಿಯ ಗುರುಗಳ ಮಾರ್ಗದರ್ಶನ... ತಮ್ಮನ ಮೃದಂಗಕ್ಕೆ ನನ್ನ ಸರಿಗಮ... ಗೆಳೆಯರೊಂದಿಗೆ ಗುದ್ದಾಟಕ್ಕೆ ರಾಗ-ತಾಳಗಳು raw material... ಈ ನಂಟಿಗೆ ಇಲ್ಲಿ ನೀವೀಗ ಈಡು...

ನೀನು ಸಂಗೀತದ್ ಬಗ್ಗೆ ಯಾಕೆ ನಿನ್ನ ಬ್ಲಾಗ್‌ನಲ್ಲಿ ಬರೀಬಾರದು ಅಂತ ಕೇಳಿ, ಕಾಡಿಸಿ-ಪೀಡಿಸಿ ಸುಸ್ತಾದ ಸ್ನೇಹಿತರಿಗೆಲ್ಲ ಮನದಾಳದ ಥಾಂಕ್ಯೂ! ತ್ಯಾಗರಾಜರ ಆರಾಧನೆ ಇವತ್ತು.ಇದಕ್ಕಿಂತ inspiration ಇನ್ನೇನು ಬೇಕು ಅಂತ ಇವತ್ತು ಇಲ್ಲಿ ಗುದ್ದಲಿ ಪೂಜೆ ಮಾಡಿಬಿಟ್ಟಿದೀನಿ. ಈಗ ಅನುಭವಿಸಿ ನಿಮ್ಮ ಕರ್ಮಫಲ!:))

10 comments:

Srikanth said...

ಮನದಾಳದ ನಿಮ್ಮ ಹಾಡು - ’ಶ್ರೀ’ ಸಿಂಚಕವಾಗಲಿ,
’ಮಹಾನುಭಾ’ವಗಳ ಘನ ಪಂಚಕವಾಗಲಿ,
ಅರಿವ ಪಸರಿಸುತ ಜನ ರಂಜಕವಾಗಲಿ !!!

Rags said...

tumba chennagide introduction....it'll be a treat for your fans ...update it regularly..waiting for it

ನಾವಡ said...

ಶ್ರೀ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.
ನಾವಡ

ಪಯಣಿಗ said...

Bhayanaka Limited na Sangeetada hosa payanakke Shubha aashaya.

Nimma eraDoo bloggaLige idu nanna modala bheTi.

Nanna karmakkondiShtu sangeeta intaadaroo sikkantaadre Santosha!!!

Sree said...

ಶ್ರೀಕಾಂತ್,rags,ನಾವಡ, ಪಯಣಿಗ(?) ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು! ಬರ್ತಾ ಇರಿ, will try to make your visits worthwhile!:)

L'Étranger said...

Awesome beginning to the blog! Two beautifully written posts have made me bookmark your blog and have ensured that I will be visiting often!

ಇಣುಕಿದಾಗೆಲ್ಲಾ ಹೊಸದೊಂದು ಸುಂದರ ಬರಹ ಕಾಣಸಿಗುತ್ತದೆಂದು ಆಶಿಸುತ್ತೇನೆ! ಏನನ್ನಾದರೂ ಹೇಳಬೇಕೆಂಬ ತವಕ, ಬರೆಯುವ ಹುಮ್ಮಸ್ಸು ಸದಾ ಇರಲಿ! :)

Sree said...

l'etranger, thank u! ಬರ್ತಾ ಇರಿ, ಹೊಸತು ಬರಿಯೋ ಪ್ರಯತ್ನ ಮಾಡ್ತಾ ಇರ್ತೀನಿ:)

ಪೂರ್ಣ ವಿ-ರಾಮ said...

ಶ್ರೀಗಳೇ


ನಿಮ್ಮ ಬರವಣಿಗೆಯ ಗುಣಮಟ್ಟ ತುಂಬಾ ಚೆನ್ನಾಗಿದೆ ಅಂದರೆ ಅದು ಅತಿಶಯೋಕ್ತಿಯಾಗಲಾರದು. ಅದಕ್ಕೇ ನಿಮ್ಮನ್ನು ಶ್ರೀಗಳೇ ಎಂದೆ. ನಮ್ಮಲ್ಲಿ ಶ್ರೀಗಳು ಎಂದರೆ ಗುರುಗಳು ಎಂದರ್ಥ
.


ಥ್ಯಾಂಕ್ಯೂ (ಧನ್ಯೋಸ್ಮಿ ಶ್ರೀಗಳೇ)


ಪ್ರೀತಿಯಿರಲಿ.....

Sree said...

@ಪೂರ್ಣ ವಿ-ರಾಮ(?!)
ಹಹ್ಹ! ಅಷ್ಟೆಲ್ಲಾ ಸೀನ್ ಇಲ್ಲ ಬಿಡಿ:)) ನಿಮ್ಮ ಪ್ರೀತಿ-ಅಭಿಮಾನದ ಮಾತುಗಳಿಗೆ ಧನ್ಯವಾದಗಳು:) ಬರ್ತಾ ಇರಿ, ಬರೀತಾ ಇರಿ!:)

Unknown said...

Blog odata eedre nage aadinagala nenapu barta ede.ninna dodda letter odoke awagu khushi irata ettu.Namma camp nalli ratri ni haadata idda "Vande Mataram" kelona anista edde.