Friday, May 16, 2008

ಸುಮ್ಮನೆರಡು ಸಾಲು

ಸಿಕ್ಕಾಪಟ್ಟೆ ಕೆಲ್ಸಗಳು... ಸಂಗೀತಾಭ್ಯಾಸ, ಮೊದಲ ಶಿಷ್ಯೆಯ ಎಕ್ಸಾಂ, ಸುಮನಾ ಜೊತೆಗೆ ಅನನ್ಯದ ’ಅಭಿವ್ಯಕ್ತಿ’ಗೆ ಸಂಪ್ರದಾಯ- ಆಧುನಿಕತೆಯ ಬಗ್ಗೆ ಹಿರಿ-ಕಿರಿಯ ಕಲಾವಿದರ ಜೊತೆ ಸಂವಾದದ ಸರಣಿ(ಅದರ್ ಬಗ್ಗೆ ಇನ್ನೊಂದ್ಸಲ ಬರೀತೀನಿ!) ಷುರು...ಅದಕ್ಕಾಗಿ interviewಗಳು, ಅವುಗಳನ್ನ ಬರಹಕ್ಕಿಳಿಸೋದು... ಹಾಗಂತ ಈಗಷ್ಟೆ ಅಂಬೆಗಾಲಿಡ್ತಿರೋ ಬ್ಲಾಗ್ ಮರಿಯನ್ನ ಮರೆತು ಕೂತ್ಕೋಬಾರದಲ್ಲ! ರಾಮನವಮಿಯಲ್ಲಿ ಕೇಳಿದ್ ಒಂದೆರಡು ಕಛೇರಿಗಳ ಬಗ್ಗೆ ಆಡಿಯೋ ಕ್ಲಿಪ್ ಹಾಕಿ ಬರಿಯೋಣ ಅಂತ ಪ್ಲ್ಯಾನ್ ಹಾಕ್ತಿದ್ದೆ. ಆದ್ರೆ ಆಡಿಯೋ ಎಡಿಟ್ ಮಾಡೋಕೆ, ವಿವರವಾಗಿ ಬರಿಯೋಕೂ ಸದ್ಯಕ್ಕೆ ಟೈಮಿಲ್ಲ... ಏನ್ಮಾಡೋದು? ಆಡಿಯೋ ಕ್ಲಿಪ್ ಹಾಕೋದರ ಟ್ರಯಲ್ ಆಗ್ಬಹುದಲ್ಲ! ನಿನ್ನ ಹಾಡಿನ ಪಾಡ್ಕಾಸ್ಟ್ ಮಾಡ್ಬಹುದಲ್ಲ ಅಂತ ಬಂದ ಸಲಹೆಗೂ ಉತ್ತರವಾಗುತ್ತೆ... ಸರಿ ರಾತ್ರಿ ಕೂತು ಭರ್ರಂತ ಹೋಗೋ ಬೈಕು, ಕಿರ್ರನ್ನೋ ಗೇಟು, ಬೊಗಳೋ ನಾಯಿಗಳ ಮಧ್ಯ ಪೂರ್ತಿ ಹಾಡು ರೆಕಾರ್ಡ್ ಮಾಡೋಕೆ ಮತ್ತೆ ಸೋಮಾರ್ತನ! ’ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ’ ಹಾಡಿನ ಎರಡೇ ಎರಡು ಸಾಲು, ನನಗೆ ತುಂಬಾ ಇಷ್ಟದ ಸಾಲುಗಳು. ಕೇಳಿ, ನನ್ನ ಸೋಮಾರಿತನ ಕಮ್ಮಿ ಆಗ್ಲಿ ಅಂತ ಆಶೀರ್ವಾದ ಮಾಡಿ!:P

ninagende nelabaan...

33 comments:

Anonymous said...

ಸೊಗಸಾಗಿದೆ. Look forward to hearing more of you. Thanks!

Sree said...

ಥ್ಯಾಂಕ್ಯೂ:)

ಭಾವಜೀವಿ... said...

ಶ್ರೀ!!
ತುಂಬಾನೆ ಚೆನ್ನಾಗಿದೆ!! ನನಗೂ ಸಹ ಇಷ್ಟದ ಸಾಲು ಇದು..!!
ರೀ ಪ್ಲೀಸ್ ಅಲ್ಲಲ್ಲ ದಯವಿಟ್ಟು ನಿಮ್ಮ ಮಧುರ ಕಂಠದಲ್ಲಿ ಇನ್ನಷ್ಟು ಭಾವಗೀತೆಗಳನ್ನು ಕೇಳಿಸ್ರಿ!!

Harisha - ಹರೀಶ said...

(ನಿಮ್ಮ ಕೋರಿಕೆಯ ಮೇರೆಗೆ) ತಥಾಸ್ತು.

ಅಮರ said...

ಹೊ!!! ಸಕ್ಕತ್ತಾಗೆ ಹಾಡ್ತಿರಾ ಕಂಡ್ರಿ.... :))
ಬೆಚ್ಚಗೆ ಹೊದ್ದು ಮಲಗಿರೊ ಸೋಮಾರಿತನವನ್ನ ಒದ್ದು ಹೊರಹಾಕಿ.... ಒಂದು ನಾಲ್ಕು ಮಸ್ತ್ ಹಾಡುಗಳನ್ನ ಹಾಡಿ, ನಮಗೆಲ್ಲ ಕೇಳಿಸಿಬಿಡಿ.... ನೋಡುವ ಮತ್ತೆಷ್ಟು ದಿನಗಳು ಕಾಯಬೇಕು ಅಂತ :ಡ್

ನಿಮ್ಮ ರೆಕಾರ್ಡಿಂಗ್ ಸಮಸ್ಯೆಗಳನ್ನೆಲ್ಲ ಒಂದೆ ಬಾರಿ ಸಾಲ್ವ್ ಮಾಡಬೇಕಂದರೆ ಈ ಪ್ಲೇಯರ್ ಕಮ್ ರೆಕಾರ್ಡರ್ ಕಡೆ ಹೋಗ ಬಹುದು .... ತುಂಬ ಒಳ್ಳೆ ಪ್ರಾಡಕ್ಟ್.
http://www.cowonamerica.com/products/iaudio/u3/

Unknown said...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Shubhada said...

sri...

i could finally listen to your voice properly (in office) :-) perhaps it requires high end system.

hey you sing just superbly. want to listen more from you. please don't be lazy anymore :-)

Unknown said...

sing the next two lines also madam :-)
it is one of my all time favorites :-)

ಧೂಮ್ರವರ್ಣ said...

ಶ್ರೀ ಅವರೇ,
ಚೆನ್ನಾಗಿದೆ. ಖುಶಿಯಾಯಿತು. ಸೋಮಾರಿತನ ಬಿಟ್ಟು ಇನ್ನಷ್ಟು ಹಾಡು ಕೇಳಸ್ರಲಾ...
ಅಂದ ಹಾಗೆ ಸಮಯವಾದಾಗ ಕೇದಗೆ ಬನ (www.kedagebana.wordpress.com) ನೋಡಿ.
ಗಂಧ ಸುಗಂಧ

ಏಕಾಂತ said...

ಹಾಡು ತುಂಬಾ ಮುದ್ದಾಗಿದೆ. ಅಷ್ಟೇ ಚೆನ್ನಾಗಿ ಹಾಡಿದ್ದೀರ ಕೂಡ. ಪದೇ ಪದೇ ಕೇಳಬೇಕೆನಿಸುವ ಸಾಲುಗಳು. ಇವು ಬರೇ ಹೊಗಳಿಕೆಯ ಮಾತಲ್ಲ. ಅಷ್ಟಕ್ಕೂ ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ...

ಮನಸ್ವಿನಿ said...

ಶ್ರೀ,

ಸಖತ್ತಾಗಿದೆ. ಅಂತು ನಿಮ್ಮ ಹಾಡು (೨ ಸಾಲಾದ್ರೂ) ಕೇಳೋ ಅವಕಾಶ ಸಿಕ್ತಲ್ಲಾ,ಅದೇ ಖುಶಿ. ಅಂದ ಹಾಗೆ ಪೂರ್ತಿ ಹಾಡು ಯಾವಾಗ ಕೇಳ್ಸ್ತೀರಾ? ದಯವಿಟ್ಟು ಕೇಳ್ಸಿ.

ಈ ಬ್ಲಾಗ್ ಕೂಡ ಸುಂದರವಾಗಿದೆ.

ಪೋಸ್ಟ್ ಮಾಡ್ತಾ ಇರಿ ದಯವಿಟ್ಟು. ನಿಮ್ಮ ಆಲಸ್ಯಕ್ಕೆ ಸ್ವಲ್ಪ ದಿನ ರಜಾ ಕೊಡಿ.

Santhosh Ananthapura said...

" ಓಡಿ ಬಂದೆನೋ ಇದೋ ಪರಿವೆ ಇರದೇ.. ಓಡಿ ಬರುವಂತೆ ನದಿ ಕಡಲ ಬಳಿಗೆ. ಎಲ್ಲಿರುವೆ "ಶ್ರೀ" ನೀನು ಈ ಭವದಿ ?!" ನೀವು ಯಾಕೆ 'ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ ನನ್ನೆದೆಯ ಕಡಲೆಕೋ ಬಿಗುತಿಹುದು' ಹಾಡನ್ನು ಹಾಡಬಾರ್ದು ? ತುಂಬಾ ಚೆನ್ನಾಗಿ ಹಾಡಿದ್ರಿ. ಈ ಎರಡು ಸಾಲುಗಳಲ್ಲಿ ನಿಮ್ಮ ಮನೋಧರ್ಮವನ್ನು ಅಭಿವ್ಯಕ್ತಿಸಿದ್ದೀರಿ. ಹೀಗೆ ಸೋಮಾರಿಯಾಗದೆ, ಜಾಣೆ ಜಾಣೆಯಾಗಿ ಒಳ್ಳೆ ಒಳ್ಳೆ ಹಾಡುಗಳ್ಳನ್ನು ನಮಗೆಲ್ಲ ಕೇಳಿಸುತ್ತಾ ಇರಿ. ಎಷ್ಟಾದರೂ ನೀವು "ಎಂದರೋ ಮಹಾನುಭಾವುಲು.. ಅಂದರಿಕಿ ವನ್ದನಮುಲೊ.." ಅಲ್ವೇ. ಹಾಡ್ತಾ ಇರಿ.

Gowtham said...

ತಮ್ಮ ಧ್ವನಿ ಕೇಳಿದ್ದು ಇದೇ ಮೊದಲ ಸಾರಿ - ಎರಡೇ ಸಾಲೇ ಆದ್ರೂ ಸೊಗಸಾಗಿದೆ; ಸ್ವಲ್ಪ ಇಲ್ಲದ್ ಟೈಮ್ ಹೆಂಗಾದ್ರೂ ಮಾಡ್ಕೊಂಡು ಪೂರ್ತಿ ಹಾಡು ರೆಕಾರ್ಡು ಮಾಡು ಪ್ಲೀಸ್!

You have student and the student is so far ahead in the program that (s)he has exam? Awesome :)

jomon varghese said...

ನಮಸ್ಕಾರ,

ಸುಮಧುರ ಧ್ವನಿ.

ಧನ್ಯವಾದಗಳು.

ಜೋಮನ್

hamsanandi said...

ಚೆನ್ನಾಗಿ ಹಾಡ್ತೀರ - ಪೂರ್ತಿ ಹಾಡು ಕೇಳಿಸ್ಬಾರ್ದೇ?
ಅಥವಾ ಶ್ರೀರಾಗದಲ್ಲೇ ಏನಾದ್ರೂ ಹಾಡ್ಬಾರ್ದಾ ;)

@ಧೂಮ್ರವರ್ಣರೆ,

ಗಂಧ-ಸುಗಂಧ ಅಂತ ಒಳ್ಳೇ ಹೆಸರಿರೋವ್ರು ಧೂಮ್ರವರ್ಣ ಅಂತ ರಾಹು ಹೆಸರಿನ ಐಡಿ ಯಾಕ್ರೀ ಇಟ್ಕೊಂಡಿದೀರಾ :)?

Harisha - ಹರೀಶ said...

ಹಂಸಾನಂದಿ ಅವರೇ, ಧೂಮ್ರವರ್ಣ ಅಂದ್ರೆ ಗಣಪತಿಯ ಹೆಸರು.

ಇಲ್ಲಿ ನೋಡಿ...

लम्बोदरं पञ्चमं च षष्ठं विकटमेव च .
सप्तमं विघ्नराजेन्द्रं धूम्रवर्णं तथाष्टमम् .. ३..

ಶಾಂತಲಾ ಭಂಡಿ (ಸನ್ನಿಧಿ) said...

Sree...
ತುಂಬ ಇಷ್ಟವಾಯ್ತು ನಿಮ್ಮ ಹಾಡು. ಧ್ವನಿಯ ಇಂಪು ತಂಪಾಗಿದೆ. ಯಾವಾಗ ಪೂರ್ತಿ ಹಾಡು ಕೇಳಿಸ್ತೀರ?
ಪ್ಲೀಸ್ ಬೇಗ ಕೇಳ್ಸಿ.

Ram said...

Tathaasthu!! :)

Very impressive writing. I stumbled on your profile on Orkut and here I am. Very happy to read good kannada after so many days. I don't get to speak it here in New York. Another 23 days and I am back in Bangalore. Can't wait to talk. Keep up the good work.

- Ramachandran iyer

Ram said...

And you have a fantastic voice. Amazing control. You remind me of Bombay Jayshri. And yeah, thanks for letting me join your carnatic music community on Orkut. That's how I came to know of your profile and you.

Take care :)

Ram Iyer

urbhat [Raj] said...

ಇದು ನಿಮ್ಮದೇ ದ್ವನಿಯಾ..? ಇಂಪಾಗಿದೆ.

Balasubramanya H.R. said...

wonderful voice.....and baaLa chennagiruva baravanige...

Aprameya said...

ಕನ್ನಡದಲ್ಲಿ ಬ್ಲೊಗ್ ಒದೊದಕ್ಕೆ ಖುಶಿ ಆಗತ್ತೆ. ನಿಮ್ಮೆ ಬ್ಲೊಗ್ ಗೆ ಆಕಸ್ಮಿಕವಗಿ ಬಂದದ್ದು. ಬರವಣಿಗೆ ಜೊತೆ ಹಾಡು ಚೆನ್ನಾಗಿ ಹಾಡ್ತೀರ.

Warm regards

ಆಲಾಪಿನಿ said...

ಶ್ರೀಮಾತಾ, ಪೂರ್ತಿ ಹಾಡು ಅನ್ನೋದಕ್ಕಿಂತ ಗುಂಗು ಹಿಡಿಸೋದು ಮುಖ್ಯ.ಅದು ನಿಮ್ ಧ್ವನಿಗೆ, ಧಾಟಿಗೆ ಇದೆ.

ರಾಘು ತೆಳಗಡಿ said...

ಹೇಯ್ ಶ್ರೀಯಕ್ಕ೨, ನಿಮ್ಮ ಇಂಪಾದ ದ್ವನಿ ನನ್ನ ಇನ್ನೋವ್ರ ಶ್ರೀ ಅಕ್ಕನ್ನ ನೆನಪಿಸ್ತು! ಹೇಯ್ ನಿಮ್ಮ ಪೂರ್ಣ ಹಾಡಿರುವ ಹಾಡುಗಳನ್ನ ನನಗೆ ಕಳಸ್ರಿ.....ಇಲ್ದಿದ್ರೆ ಬ್ಲಾಗ್ ನಲ್ಲಿ ಹಾಕಿ.....!

nishu mane said...

Shree,
ತುಂಬಾ ದಿನ ನಿಮ್ಮ ಹಾಡು ಕೇಳಲಾಗಿರಲಿಲ್ಲ (ಅದೇನೋ ಪ್ಲೇಯರ್ ಪ್ರಾಬ್ಲಂ). ಕೇಳಿದ ದಿನ(ತುಂಬಾ ಖುಶಿಯಾಯ್ತು) ಕಾಮೆಂಟ್ ಹಾಕೋಕೆ ಟೈಮ್ ಇರ್ಲಿಲ್ಲ. ಈಗ ಬಂದು ನೋಡಿದ್ರೆ, ಇದೇ ಲಾಸ್ಟ್ ಪೋಸ್ಟಿಂಗ್! ಏನೂ ತಡ ಆಗಿಲ್ಲ. ತಿಂಗಳುಗಟ್ಟಳೆ ಬಿಟ್ಟು ಬಿಟ್ಟು ಪೋಸ್ಟ್ ಮಾಡೋ ನೀವು, ನಿಮಗಿಂತಲೂ ಲೇಟ್ ಆಗಿ ಕಾಮೆಂಟ್ ಮಾಡೋ ನಾನು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬಹುದು ಅನ್ನಿಸ್ತಿದೆ.
ಅಂದ್‍ಹಾಗೆ, ಹಾಡಿನ ಸಾಲು, ನೀವು ಹಾಡಿರೋದು ಎರಡೂ ಚೆನ್ನಾಗಿವೆ. ನಿಮ್ಮ ಹೊಸ ಫೋಟೋನೂ ಚೆನ್ನಾಗಿದೆ. ಹಳೇದೂ ಚೆನ್ನಾಗಿತ್ತು. ಹೀಗೇ ನಗ್ತಾ ಇರಿ ಯಾವಾಗ್ಲೂ.
-ಮೀರ.

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

ರವಿರಾಜ್ ಆರ್.ಗಲಗಲಿ said...

bhavageeteyante blog sumdhuravagide, nimminda mattashtu sangeetada anubhava hanchikolluva niriksheyalliddene...nanna blog kuda nodi

nirusha said...

mam,
ನನಗೆ ಹಿ೦ದುಸ್ತಾನ್ ಸ೦ಗೀತಾ ಅ೦ದ್ರೆ ತು೦ಬ ಇಷ್ಟ.ನೀವು ನನ್ನ ಬ್ಲಾಗ್ ಗೆ ಬ೦ದದ್ದಕ್ಕೆ ತು೦ಬ ಖುಶಿಯಾಗಿದೆ.

ಸಾಗರದಾಚೆಯ ಇಂಚರ said...

ಶ್ರೀ ಅವರೇ,
ಚೆನ್ನಾಗಿದೆ. ಖುಶಿಯಾಯಿತು.

Gubbacchi said...

super aagi haadtira.

ಡಾ.ಅರುಣ್ ಜೋಳದ ಕೂಡ್ಲಿಗಿ said...

tumba sogasaagi haadidiri kanri khushi aaytu.

Meena Jois said...

ಶ್ರೀ,

ನಿಮ್ಮ ಧ್ವನಿ ಬಹಳ ಸೋಗಸಾಗಿದೆ. ಪೂರ್ತಿ ಹಾಡು ಹಾಡಿ ಲಿ೦ಕ್ ಪೋಸ್ಟ್ ಮಾಡಿ.

Thanks,

Meena

ಉಷಾ... said...

sooper haadu... voice... poorti haadu keLsi... please....