Tuesday, May 5, 2009

ಸಂಪ್ರದಾಯ ೦೯ - ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಕಾರ್ಯಕ್ರಮ(ಬ್ಲಾಗ್ ಕಡೆ ತಲೆ ಹಾಕ್ದೇ ಬಿಜಿಯಾಗಿರೋದಕ್ಕೆ ನಾನು ಕೊಡೋ ಏನೇನೋ ಕಾರಣಗಳಲ್ಲಿ ಲೇಟೆಸ್ಟು ಇದು.)
ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಮುಖ ಆಕರ ಗ್ರಂಥಗಳಲ್ಲೊಂದು ’ಸಂಗೀತ ಸಂಪ್ರದಾಯ ಪ್ರದರ್ಶಿನಿ’. ನೂರು ವರ್ಷಗಳ ಹಿಂದೆ(೧೯೦೫) ತೆಲುಗಿನಲ್ಲಿ ಪ್ರಕಟವಾದ ಈ ಪುಸ್ತಕ ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರ ೨೨೫ ಕೃತಿಗಳನ್ನು ಒಳಗೊಂಡಿದ್ದು, ಶಾಸ್ತ್ರ-ಪ್ರಯೋಗಗಳೆರಡಕ್ಕೂ ಪ್ರಾಮುಖ್ಯ ನೀಡಿದೆ. ಕರ್ನಾಟಕ ಸಂಗೀತದ ಜೀವ ಅನ್ನಬಹುದಾದ ಗಮಕಗಳನ್ನು ಪ್ರದರ್ಶಿನಿ ವಿವರಿಸಿರುವ ರೀತಿ ಅದರ ಪ್ರಸ್ತುತತೆಗೆ ಇನ್ನೊಂದು ಮುಖ್ಯ ಕಾರಣ. ಶ್ರೀ ಆನಂದರಾಮ ಉಡುಪರು ರಚಿಸಿರುವ ಈ ಗ್ರಂಥದ ಕನ್ನಡ ಆವೃತ್ತಿಯನ್ನು ಅನನ್ಯ ಇತ್ತೀಚೆಗೆ ಹೊರತಂದಿದೆ. ಪ್ರದರ್ಶಿನಿಯ ಕನ್ನಡ ಅವತರಣಿಕೆಯನ್ನು ಜನರಿಗೆ ತಲುಪಿಸುವ ಪ್ರಯತ್ನ - ಸಂಪ್ರದಾಯ ೦೯. ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಿಗೆ ಮೀಸಲಿಟ್ಟ ಈ ಕಾರ್ಯಕ್ರಮ ಮೇ ೧೦ರಂದು ಗಾಯನಸಮಾಜದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಮುಖ ಗಾಯಕರಾದ ವಿ ಎಂ ಎಸ್ ಶೀಲಾ, ವಿ ಟಿ ಎಸ್ ಸತ್ಯವತಿ, ವಿ ಆರ್ ಕೆ ಪದ್ಮನಾಭ, ವಿ ಟಿ ಎಂ ಕೃಷ್ಣ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಪ್ರದರ್ಶಿನಿಯ ಕುರಿತು ಶ್ರೀ ವಿ ಶ್ರೀರಾಂ ಹಾಗೂ ಶ್ರೀಮತಿ ಆರ್ ಎಸ್ ಜಯಲಕ್ಷ್ಮಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಆಹ್ವಾನಪತ್ರಿಕೆ ಇಲ್ಲಿದೆ. ವಿವರಗಳಿಗೆ:www.ananyasampradaya.blogspot.ಕಂ.4 comments:

ಗಿರಿ said...

ಶ್ರೀ...
ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ... ಬರಹಗಳು ಇಷ್ಟವಾದವು...MS ಬಗೆಗಿನ ಪುಸ್ತಕದ ಬಗ್ಗೆ ಗೊತ್ತಿರಲಿಲ್ಲ...ನಿಮ್ಮ ಬ್ಲಾಗ್ ಕೊಡುವ ಮಾಹಿತಿಗಳು ಚೆನ್ನಾಗಿವೆ...
ನಾನೂ ರಾಮನವಮಿ ಕೇಳುಗ!

ತಿಂಗಳಿಗೊಂದರಂತೆ ಬರೆಯುವ ನೀವು ವಾರಕ್ಕೊಂದರಂತೆ ಬರೆಯುವರಂತಾಗಲಿ..! ಶುಭಾಶಯಗಳು.

ಧನ್ಯವಾದಗಳು,
-ಗಿರಿ

Benny Thomas said...

I chanced upon your blog and found it very informative. The event blogs are striking enough to have a feel of the event, so, I would like to have a little chit-chat on your blogging interests. And even we are coming up with an event on startups on June 6th. So, can I have your contact details? Looking forward to hear from you.

Lakshmi Rangaswamy said...

sree
naanu iga taane nimma blog na parichaya maadikondiddene.nanagu namma maneyvarigu karnaataka shaastreeya sangeeta venda re praana.saamanyavaagi bengaloorina yella khacherigu naavu hogutteve.nimma blog ninda avugala maahitige dhanyavaadagalu.heege bareyuttiri.

Dhanya said...

Hello Srimatha, i saw your posts in 'carnatic music in bangalore, Orkut community'. I coudint contact u through orkut, so the blog.Sorry for the trouble. I couldint find any contact details of teacher in BTM area. can you share the same if u have it.
Do upload more in esnips,would love to hear more, thanks