Tuesday, January 29, 2008

ಎಂ ಎಸ್ ಬದುಕು - ಒಂದು ಸುಂದರ ಕಥೆ

ಕರ್ನಾಟಕ ಸಂಗೀತ ಭಕ್ತಿಪ್ರಧಾನ ಅಂತ ಹೇಳೋ ಗೆಳತಿಯ ಜೊತೆ ಗಂಟೆಗಟ್ಟಲೆ ದಿನಗಟ್ಟಲೆ ಗುದ್ದಾಡ್ತೀನಿ, socio-polictical, cultural, historical ಕಾರಣಗಳು, ನಿದರ್ಶನಗಳು ಹಾಗೆ ಹೀಗೆ... ಮುಗಿಯದ ಯುದ್ಧ, the best way to kill time that I perhaps know! ಅದೇ ಕರ್ನಾಟಕ ಸಂಗೀತದಲ್ಲಿ ಭಕ್ತಿ ಅಂದ ತಕ್ಷಣ ಎಲ್ಲರ ಕಣ್ಣ್ಮುಂದೆ ಬರೋ ಎಂ ಎಸ್ ಸುಬ್ಬುಲಕ್ಷ್ಮಿಯವರ ಬಗ್ಗೆ ಬರೆದ ಈ ಸಾಲುಗಳನ್ನ ಓದುತ್ತಿದ್ದಾಗ ಮಾತ್ರ ಕಣ್ಣುತುಂಬಿ ಬಂದುಬಿಡತ್ತೆ!:

"At the time of the UN concert, the couple stayed at the apartment of an Esso oil company, another Mylapore networker. After lunch one day MS began singing for the small gathering of friends who had assembled in the apartment. To their dismay, repair works in the adjoining apartment provided a staedy accompaniment of unmusical sounds such as hammer knocks and metal sawinf. The apartment owner was embarrassed but said he was helpless. MS alone seemed unconcerned and went on singing. A few minutes later, the repair noises suddenly ceased and two helmeted American handymen appeared at the apartment door. 'Can't understand a thing,' they said, 'but it's very touching. May we listen?' That was perhaps MS's finest hour in America."

ಟಿ ಜೆ ಎಸ್ ಜಾರ್ಜ್ ಬರೆದಿರುವ ’MS: A Life in Music' ಪುಸ್ತಕದ ಸಾಲುಗಳಿವು. ಎಂ ಎಸ್ ತಮ್ಮ ಯೌವ್ವನದ ದಿನಗಳಲ್ಲಿ ಮತ್ತೊಬ್ಬ ಪ್ರಚಂಡ ಕಲಾವಿದ ಜಿ ಎನ್ ಬಿಯವರಿಗೆ ಬರೆದ ಪ್ರೇಮಪತ್ರಗಳ ಉಲ್ಲೇಖದಿಂದ ಸುದ್ದಿಯಾಗಿದ್ದ ಈ ಪುಸ್ತಕವನ್ನ ತುಂಬಾ ದಿನಗಳಿಂದ ಓದ್‌ಬೇಕು ಅಂದ್ಕೋತಿದ್ದೆ. ನನ್ನ ಗುದ್ದಾಟದ ಪಾರ್ಟ್‌ನರ್ ಗೆಳತಿ ಉಡುಗೊರೆಯಾಗಿ ಈ ಪುಸ್ತಕವನ್ನೇ ಕೈಗಿಟ್ಟಾಗ ನನ್ನ ಸೋಮಾರಿತನಕ್ಕೆ ಒಂದು ಬ್ರೇಕ್ ಕೊಡಬೇಕಾಯ್ತು!

ಮಧುರೈನ ಸೀಮಿತ ಪರಿಸರದಲ್ಲಿ ತಂಬೂರಿಯ ಶ್ರುತಿಯೊಂದಿಗೆ ಆಡುತ್ತಾ ಬೆಳೆಯುವ ಪುಟ್ಟ ಎಂ ಎಸ್, ಹತ್ತು ವರ್ಷದ ಪೋರಿ ಗ್ರಾಮಫೋನ್ ಹೀರೊಯಿನ್ ಆದದ್ದು, ಆ ವಯಸ್ಸಿಗೆ, ಅಂದಿನ ಕಾಲಕ್ಕೆ, ನಮಗೆಲ್ಲ ಪರಿಚಯವಿರೋ ಎಂ ಎಸ್ ಅವರ ಸೌಮ್ಯ ವ್ಯಕ್ತಿತ್ವಕ್ಕೆ ಅಚ್ಚರಿಯೆನಿಸೋ ಅಷ್ಟು ದಿಟ್ಟ ನಿರ್ಧಾರಗಳು... ಬದುಕಿನ ಹಾದಿ ತನ್ನ ಕೈಮೀರುತ್ತಿದೆಯೆನಿಸಿದಾಗ ರಾತ್ರೋರಾತ್ರಿ ರೈಲು ಹತ್ತಿ ಚೆನ್ನೈನಲ್ಲಿಳಿದುಬಿಡುವ ದಿಟ್ಟತನ-ಮುಗ್ಧತೆಗಳ ಅದ್ಭುತ ಸಮ್ಮಿಳನ... ಮಧುರೈನ ದೇವದಾಸಿಕುಟುಂಬದಲ್ಲಿ ಬೆಳೆದ ಹುಡುಗಿ ಮದ್ರಾಸಿನ ಸಂಗೀತಸಾಮ್ರಾಜ್ಞಿಯಾಗೋದರ ಜೊತೆ ಐಯ್ಯರ್ ಐಕಾನ್ ಆಗಿ ರೂಪಾಂತರಗೊಂಡದ್ದು... ದೇಶಾದ್ಯಂತ ಕಚೇರಿಗಳು, ವಿದೇಶಪ್ರವಾಸಗಳು, ವಿವಿಧಕ್ಷೇತ್ರಗಳ ಘಟಾನುಘಟಿಗಳ ಸಂಪರ್ಕ,ಪ್ರಶಸ್ತಿ-ಪುರಸ್ಕಾರಗಳು...ಎಲ್ಲದರ ನಡುವೆ ಸಂಗೀತವನ್ನ ಭಕ್ತಿಯ ಅಭಿವ್ಯಕ್ತಿಯಾಗಿ ಆರಾಧಿಸುತ್ತ ಕಡೆತನಕ ಮುಗ್ಧತೆಯ ಪ್ರಶಾಂತ ದ್ವೀಪವಾಗಿಯೇ ಉಳಿದ ಎಂ ಎಸ್... ಪುಸ್ತಕ ಓದಿಸಿಕೊಳ್ತಾ ಹೋಯ್ತು.

ಒಣಜೀವನಚರಿತ್ರೆಯಾಗಿಸದೇ, ಅಂದಿನ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳನ್ನ, ಟ್ರೆಂಡ್‌ಗಳನ್ನ, ಬದಲಾವಣೆಗಳನ್ನ ತೆರೆದಿಡುತ್ತಾ, ಅವುಗಳ ಹಿನ್ನೆಲೆಯಲ್ಲಿ ಎಂ ಎಸ್ ಕಥೆ ಹೇಳುತ್ತಾ ಸಾಗುವ ಜಾರ್ಜ್ ಶೈಲಿ ಅಪ್ಯಾಯಮಾನವೆನಿಸ್ತು. ಇಂದಿನ ಕಲಾವಿದರ ಬಗ್ಗೆ ಬರಿಯುವಾಗ ಸ್ವಲ್ಪ ’ಹಿಂದೊಂದು ಚೆಂದದ ಕಾಲವಿತ್ತು’ ಮೋಡ್‌ಗೆ ಜಾರುತ್ತಾರೆ ಎನಿಸಿದರೂ ಈ ಪುಸ್ತಕ ಕಲ್ಚರಲ್ ಹಿಸ್ಟರಿ ಅಧ್ಯಯನಕ್ಕೆ ಒಂದು ಅಮೂಲ್ಯ ಕೊಡುಗೆ ಅನ್ನೋದರಲ್ಲಿ ಸಂಶಯ ಇಲ್ಲ.

ಜಿ ಎನ್ ಬಿ-ಎಂ ಎಸ್ ಅಧ್ಯಾಯ ಎಂ ಎಸ್ ಬಗೆಗಿನ ಗೌರವಕ್ಕೆ ಮೆರುಗು ನೀಡಿತೇ ಹೊರತು ಯಾವುದೇ ಚೀಪ್ ಗಾಸಿಪ್‌ನ ಹಾದಿ ತುಳಿದಿಲ್ಲ. ಅದನ್ನ ವಿವಾದಕ್ಕೆ ತಿರುಗಿಸಿದವರ, ಹೀಗೆಲ್ಲಾ ಬರೀತಾರಾ, ಇವೆಲ್ಲ ಬರೀಬೇಕಾ ಅಂದವರ ಬಗ್ಗೆ ಏನ್ ಹೇಳ್ಬೇಕೊ ಗೊತ್ತಿಲ್ಲ! ನನಗಂತೂ ಎಂ ಎಸ್ ಜೀವನದ ಈ ಅಧ್ಯಾಯದಲ್ಲಿ ಎದ್ದುಕಾಣೋ ಅವರ ಭಾವತೀವ್ರತೆ, ಆಮೇಲಿನ ನಿರ್ಧಾರದ ಧೃಡತೆ ಅವರು ಎಂಥಾ Strong Woman ಆಗಿದ್ದರು ಅನ್ನೋದನ್ನ ಅರ್ಥ ಮಾಡ್ಕೊಳ್ಳೋದಿಕ್ಕೆ ಅತ್ಯವಶ್ಯ ಅನ್ನಿಸ್ತು, ಎಂ ಎಸ್ ಮನಸ್ಸಿಗೆ ಇನ್ನೂ ಹತ್ತಿರ ಅನ್ನಿಸಿದ್ರು, ಇನ್ನೂ ಎತ್ತರ ಅನ್ನಿಸಿದ್ರು!

ಎಂ ಎಸ್ ಬಗೆಗಿನ ಪುಸ್ತಕ ಅಂದಮೇಲೆ ಅವರ ದಿವ್ಯಕಳೆಯ ಫೋಟೋಗಳೂ ಇದ್ದೇ ಇವೆ. ಒಟ್ಟಿನಲ್ಲಿ ಕಲೆ-ಸಂಸ್ಕೃತಿಗಳಲ್ಲಿ ಆಸಕ್ತಿ ಇರೋವ್ರು ಓದಲೇಬೇಕಾದ ಪುಸ್ತಕ.

2004ರಲ್ಲಿ ಹೊರಬಂದ ಈ ಪುಸ್ತಕ ಹಾರ್ಪರ್ ಕಾಲಿನ್ಸ್ ಹಾಗೂ ಇಂಡಿಯಾ ಟುಡೇ ಸಮೂಹದ ಪ್ರಕಟಣೆ.

7 comments:

Adamya said...

chennagi bardideeyama magu..devru ninge oLLe vidya buddhi kottu kaapadli :)

ನಾವಡ said...

ಶ್ರೀ ಅವರೇ,

ಟಿಜೆಎಸ್ ಜಾರ್ಜ್ ಬರೆದಿರುವ ಒಳ್ಳೆಯ ಪುಸ್ತಕವದು. ಅದ್ಭುತವಾಗಿದೆ. ಒಳ್ಳೆಯ ಸಾರವನ್ನು ನೀವು ಬ್ಲಾಗ್ ನ ಆರಂಭದ ಕೊಡುಗೆಯಾಗಿ ನೀಡಿದ್ದೀರಿ.
ಚಿಕ್ಕ ಚಿಕ್ಕ ಸಂಗತಿಗಳನ್ನು ನೀಡಿ, ಓದಲು ಖುಶಿಯಾಗುತ್ತೆ. ಅಂದಹಾಗೆ ಪಂ. ಜಸ್ ರಾಜ್ ರ ವೆಬ್ ಸೈಟ್ ಗೆ ಭೇಟಿಕೊಡಿ, ಚೆನ್ನಾಗಿದೆ.

ನಾವಡ

Shashi said...

Sree avare,
Tumba chennagi barediddeeri. Naanu khanDita ee pustakavannu odteeni.
ishTu chennagi kaguNita tappillade baredirodanna naanu ellu noDilla. Nimma bareyuva shaili tumba chennagide.

Sree said...

ಅದಮ್ಯ ತಾತ, ನೀವ್ ಬಂದು ಆಶೀರ್ವಾದ ಮಾಡಿದ್ದಕ್ಕೆ ನನ್ನ್ ಬ್ಲಾಗ್ ಜನ್ಮ ಸಾರ್ಥಕ ಆಯ್ತು:)) ನಿಮ್ಗೂ ಸ್ವಲ್ಪ ಒಳ್ಳೆ ವಿದ್ಯಾಬುದ್ಧಿ ಕೊಟ್ಟು ಕಾಪಾಡ್ಲಿ ದೇವ್ರು;)

ನಾವಡರೇ ಧನ್ಯವಾದಗಳು, ತುಂಬಾ ಉದ್ದಕ್ಕೆ ಕೊರೀಬೇಡ ಅಂತ indirectಆಗಿ ಸೂಚಿಸಿದ್ದು ಅರ್ಥ ಆಯ್ತು:))

ಶಶಿ, ಧನ್ಯವಾದಗಳು. ನಮ್ಮ್ ಭಾಷೆ ನಾವ್ ಸರೀಗ್ ಬರೀದಿದ್ರೆ ಹೆಂಗೆ ಅಲ್ಲ್ವಾ?:)

ಎಂ.ಎಸ್.ಶ್ರೀರಾಮ್ said...

ಶ್ರೀ
ನನ್ನ ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ಬಿಟ್ಟದ್ದಕ್ಕೆ ಧನ್ಯವಾದಗಳು. ಅದಕ್ಕೆ ಅಲ್ಲೇ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ನಿಮ್ಮ ಬರಹ ಚೆನ್ನಾಗಿದೆ, ಆಸಕ್ತಿ ಉಂಟುಮಾಡುತ್ತದೆ. ಆದರೆ ಮಧ್ಯದಲ್ಲಿ ತುಂಬಾ ಇಂಗ್ಲಿಷ್ ಪ್ರಯೋಗ ಓದಿಗೆ ಧಕ್ಕೆ ಉಂಟುಮಾಡುತ್ತದೆ. ಸಾಧ್ಯವಾದಷ್ಟೂ ಪೂರ್ತಿ ಕನ್ನಡ ಅಥವಾ ಇಂಗ್ಲೀಷಿನ ವಾಕ್ಯಗಳಿದ್ದರೆ ಓದಲು ಸುಲಭ. ನಿಮ್ಮ ಆಸಕ್ತಿಯ ವಿಸ್ತಾರ ಅದ್ಭುತವಾದದ್ದು. ಬರೆಯುತ್ತಾ ಇರಿ. ನಾನೂ ಓದುತ್ತಾ ಇರುತ್ತೇನೆ.

ಶ್ರೀರಾಮ್

Sree said...

ಶ್ರೀರಾಮ್ ಸರ್,
ನೀವು ಬಂದು ಓದಿ, ಕಾಮೆಂಟಿಸಿದ್ದು ತುಂಬಾ ಖುಷಿಯಾಯ್ತು!
ತಲೆಯಲ್ಲಿ ವಿಚಾರಗಳು ಪೂರ್ತಿ ಕನ್ನಡ/ಪೂರ್ತಿ ಇಂಗ್ಲಿಷ್‌ನಲ್ಲಿ ಬರೋ ಅಷ್ಟು ಪುಣ್ಯ ನನ್ನ ಜೆನರೇಷನ್‌ನ ಬೆಂಗ್ಳೂರ್‌ಕನ್ನಡಿಗರು ಮಾಡಿಲ್ಲವೇನೋ! ತಲೆಯಲ್ಲಿ ಬರದ ಪದ ಕನ್ನಡಕ್ಕೆ ಇಳಿಸುವಾಗ ಎಲ್ಲೋ ಸ್ವಲ್ಪ ಅಸಹಜತೆ ಇನ್ನೂ ಕಾಣತ್ತೆ - ನನ್ನ ಬರಹದಲ್ಲಿ. ಸುಲಲಿತವಾಗಿ, ನಿಘಂಟಿನ ಸಹಾಯವಿಲ್ಲದೇ ಓದೋಹಾಗೆ ಅವುಗಳನ್ನ ಕನ್ನಡದಲ್ಲಿ ಹೇಳೋಕೆ ಬಂದ ದಿನ ಈ ಥರ ಎಡಬಿಡಂಗಿ ಭಾಷೆಯಲ್ಲಿ ಖಂಡಿತ ಬರಿಯೋಲ್ಲ!:)

ಕುವೆಂಪು-ಕಾರಂತರ ನಂತರದ ಸಾಹಿತ್ಯ ಸ್ವಲ್ಪ ಓದಿಕೊಳ್ಳೋದರಿಂದ ಈ ಬ್ರಿಡ್ಜಿಂಗ್ ಸ್ವಲ್ಪ ಸುಲಭವಾಗಬಹುದೇನೋ ಅಂದುಕೊಂಡು ಓದೋಕೆ ಷುರು ಮಾಡಿದ್ದೀನಿ... ನಿಮ್ಮಂತಹ ಸೀನಿಯರ್ಸ್’ ಸಲಹೆಗಳು ಸಿಕ್ಕರೆ ಬಹಳ ಸಹಾಯ ಆಗುತ್ತೆ...

RAVI REDDIAR said...

JUST I HAVE SEEN YOUR BLOG, SMITA PATIL, GOOD VOICE, ENJOY THE LIFE AMBITION TRAVEL, ALONG WITH DESTINATION,SOME THINKS WITH HHEAD, WHILE SOME WITH HEART, MS.SHREE IS INBETWEEN.
I LIKE THE WORDING, AND THE
SALIENT CONTENTS.

NOTHING INTERSTED ABOUT ME.

N.RAVI MY BLOG

www.nravi.co.cc

OR

www.hisnobelwoes.blogspot.com

mit- chennai ALUMNI B.TECH(ELECS)

HYPOTHESIS 12 CRORRE WORTH. LIVES BY RS.50 POCKET MONEY GIVEN BY THE PENSION FATHER. DETAILS IN MY BLOG.

AGE , TOO OLD 52 YEARS.

SATURDAY NIGHT ALL INDIA RADIO MUSIC PROGRAM.

SINCE I DONOT KNOW MUCH ABOUT KARNATIC MUSIC, I LIKE OLD SONGS.

MUSIC IS MY VERY FAVOURITE WHETHER IT IS IN ANY FORM, MELODIES ROJA,

VELLAI MALAI, KARUNA- MALARE,

KANADA RAGA- VAKRA RAGA